ಡಾ.ರಾಜ್ ಅವರ ಸಾಧನೆಗಳು ಅಸಂಖ್ಯ. ಸಮಾಜದ ಮೇಲೆ ಅವರ ಚಿತ್ರಗಳ ಪ್ರಭಾವ ಎಷ್ಟರ ಮಟ್ಟಿಗಿತ್ತೆಂದರೆ… ಅವರ ಭಕ್ತ ಕನಕದಾಸ, ಮಂತ್ರಾಲಯ ಮಹಾತ್ಮೆ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ, ಸಂತ ತುಕಾರಾಮ ಮುಂತಾದ ಭಕ್ತಿ ಪ್ರಧಾನ ಚಿತ್ರಗಳನ್ನು ನೋಡಿದ ಮೇಲೆ ಉಡುಪಿ, ಮಂತ್ರಾಲಯ, ಪಂಢರಾಪುರ, ತಿರುಪತಿಗಳಿಗೆ ಹೋಗುವ ಭಕ್ತರ(ಕನ್ನಡಿಗ) ಸಂಖ್ಯೆ ದ್ವಿಗುಣವಾಯಿತು ಎಂದರೆ ಅತಿಶಯೋಕ್ತಿ ಆಗಲಾರದು. ಮುಂಚೆ ಮೇಲ್ವರ್ಗದವರೇ ಹೆಚ್ಚಾಗಿ ಸಂದರ್ಶಿಸುತ್ತಿದ್ದ ಉಡುಪಿ, ಮಂತ್ರಾಲಯ ಮುಂತಾದ ಜಾಗಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದ ಶ್ರೇಯ ಅವರದ್ದು.
ಮನಸ್ಸಿನಲ್ಲಿ ಸ್ವಲ್ಪ ಭಕ್ತಿ ಇದ್ದವ, ಕನ್ನಡದ ಮೇಲೆ ಸ್ವಲ್ಪ ಅಭಿಮಾನ ಇದ್ದವ ಅವರ ಚಿತ್ರಗಳನ್ನು ನೋಡಿ ಕಣ್ಣೀರಿಡದೇ(ಭಾವಪರವಶರಾಗದೇ) ಇರಲು ಸಾಧ್ಯವೇ ಇಲ್ಲ.
ಅವರು ತಮ್ಮ ಚಿತ್ರಗಳಲ್ಲಿ ಆದಷ್ಟು ಕರ್ನಾಟಕದ ಪ್ರಕೃತಿ ಸೌಂದರ್ಯವನ್ನೇ ತೋರಿಸಿದರು. ನಮ್ಮ ನಾಡು ಯಾವ ಕಾಶ್ಮೀರ, ಸ್ವಿಟ್ಜರ್ ಲ್ಯಾಂಡ್ ಗಳಿಗೆ ಕಮ್ಮಿ ಇಲ್ಲ ಎಂದು ಸಾಬೀತುಪಡಿಸಿದರು.
ನಮ್ಮೂರಾದ ಆಗುಂಬೆಯನ್ನು ಜನಪ್ರಿಯಗೊಳಿಸಿದ್ದಕ್ಕೆ ನಾನು ಸದಾ ಅವರಿಗೆ ಚಿರ ಋಣಿ.
ಇಂದಿನ ತಗಡು…, … ನನ್ ಮಗನೆ… ಮುಂತಾದ ಸಂಭಾಷಣೆಯ ಚಿತ್ರಗಳನ್ನು ನೋಡಿದರೆ ಬಹಳ ಬೇಜಾರಾಗುತ್ತದೆ. ಸ್ಫುಟವಾದ, ಇಂಪಾದ ಕನ್ನಡದ ಸಂಭಾಷಣೆಗಳಿಂದ ಕೂಡಿದ, ಪರಿವಾರದ ಎಲ್ಲರೂ ಕುಳಿತು ನೋಡುವಂತಹ ಚಿತ್ರಗಳ ಯುಗ ರಾಜ್ ಅವರ ಜೊತೆಯೇ ಅಂತ್ಯವಾಯಿತೇನೋ….
2 comments:
avara chitragalalli nanu kandahage ondu ashleela drushyagalagali athava ketta bhasa upayogagalagali iralilla.
avaru madiruva pathragalu vibhinna, "Most unique" andre avara Bond movies. Avara hadugalu amogha. Ivella innilla antha dhukka, avara atmakke shanti sigali antha devaralli prarthisuthene.
satyavaagalu...
Post a Comment